24 ಗಂಟೆಗಳಲ್ಲಿ 2 ಲಕ್ಷ ಟಿಕೆಟ್​ ಸೇಲ್​! ಮುಂಗಡ ಟಿಕೆಟ್​ ಬುಕ್ಕಿಂಗ್​ನಲ್ಲಿ 6 ಕೋಟಿಗೂ ಅಧಿಕ ಆದಾಯ ಗಳಿಸಿದ ಕಲ್ಕಿ!

author-image
AS Harshith
Updated On
24 ಗಂಟೆಗಳಲ್ಲಿ 2 ಲಕ್ಷ ಟಿಕೆಟ್​ ಸೇಲ್​! ಮುಂಗಡ ಟಿಕೆಟ್​ ಬುಕ್ಕಿಂಗ್​ನಲ್ಲಿ 6 ಕೋಟಿಗೂ ಅಧಿಕ ಆದಾಯ ಗಳಿಸಿದ ಕಲ್ಕಿ! 
Advertisment
  • ಕರ್ನಾಟಕದಲ್ಲಿ ಎಷ್ಟು ಟಿಕೆಟ್​ ಸೇಲ್​ ಆಗಿದೆ?
  • ವಿದೇಶದಲ್ಲೂ ಪ್ರಭಾಸ್​ ಕಲ್ಕಿ ಸಿನಿಮಾದ ಅಬ್ಬರ ಭಾರೀ ಜೋರು
  • ಇಂದು ಬುಕ್ಕಿಂಗ್​ ಆದ ಮುಂಗಡ ಟಿಕೆಟ್​ ಬಗ್ಗೆ ಮಾಹಿತಿ ಇಲ್ಲಿದೆ

ಡಾರ್ಲಿಂಗ್​ ಪ್ರಭಾಸ್​ ನಟನೆಯ ಕಲ್ಕಿ 2898 AD ಸಿನಿಮಾ ತೆರೆಗೆ ಬರಲು ಇನ್ನೆರಡೇ ದಿನ ಬಾಕಿ. ಈಗಾಗಲೇ ಫ್ಯಾನ್ಸ್​ ಬಹುನಿರೀಕ್ಷೆಯ ಈ ಸಿನಿಮಾ ನೋಡಲು ತುದಿಗಾಲಲ್ಲಿ ನಿಂತಿದ್ದಾರೆ. ಅವರಿಗಾಗಿಯೇ ಚಿತ್ರತಂಡ ಸಿನಿಮಾದ ಮುಂಗಡ ಟಿಕೆಟ್​​ ಬುಕ್ಕಿಂಗ್​ ಆಯ್ಕೆಯನ್ನು ನೀಡಿದೆ. ಆದರೆ ಅಚ್ಚರಿಯ ಸಂಗತಿ ಎಂದರೆ 24 ಗಂಟೆಗಳಲ್ಲಿ ಭಾರತದಲ್ಲಿ 2 ಲಕ್ಷಕ್ಕೂ ಹೆಚ್ಚು ಟಿಕೆಟ್​ ಮಾರಾಟವಾಗಿದೆ.

6 ಕೋಟಿಗೂ ಅಧಿಕ ಮೊತ್ತ ಸಂಗ್ರಹ

ನಾಗ್​ ಅಶ್ಚಿನ್​ ನಿದೇರ್ಶನದಲ್ಲಿ ಕಲ್ಕಿ ಸಿನಿಮಾ ಮೂಡಿಬಂದಿದೆ. ಚಲಸಾನಿ ಅಶ್ವಿನಿ ದತ್​ ಬಂಡವಾಳ ಹೂಡಿದ್ದಾರೆ. ತಮ್ಮ ವೈಜಯಂತಿ ಸಿನಿಮಾದ ಮೂಲಕ ಕಲ್ಕಿ ಸಿನಿಮಾವನ್ನು ಭರ್ಜರಿ ಮೊತ್ತಕ್ಕೆ ನಿರ್ಮಿಸಿದ್ದಾರೆ. ಅಂದಹಾಗೆಯೇ ಇಷ್ಟೆಲ್ಲಾ ಹೈಪ್​ ಕ್ರಿಯೇಟ್​ ಮಾಡಿರುವ ಕಲ್ಕಿ ಸಿನಿಮಾ ಸೋಮವಾರ ಮುಂಗಡ ಟಿಕೆಟ್​ ಬುಕ್ಕಿಂಗ್​ನಲ್ಲಿ ಬೆಳಿಗ್ಗೆ 10.30 ಸುಮಾರಿಗೆ ಬರೋಬ್ಬರಿ 6 ಕೋಟಿ ರೂಪಾಯಿಗೂ ಹೆಚ್ಚು ಮೊತ್ತವನ್ನು ಸಂಗ್ರಹಿಸಿದೆ. ಈ ಕುರಿತಾಗಿ ಡೇಟಾ- ಟ್ರ್ಯಾಕಿಂಗ್​ ಪೋರ್ಟಲ್​​ ಸ್ಯಾಕ್​ನಿಲ್ಕ್​ ತಿಳಿಸಿದೆ.

ಇದನ್ನೂ ಓದಿ: ಅಬ್ಬಾ..! ಕಲ್ಕಿ 2898 AD ಸಿನಿಮಾಗಾಗಿ ಪ್ರಭಾಸ್​ ಪಡೆದ ಸಂಭಾವನೆ ಎಷ್ಟು ಗೊತ್ತಾ?


">June 23, 2024

ಇಂದು ಎಷ್ಟು ಟಿಕೆಟ್​ ಸೇಲ್​ ಆಗಿದೆ

ಭಾನುವಾರದಿಂದ ಮುಂಗಡ ಬುಕ್ಕಿಂಗ್​ ಆರಂಭಗೊಂಡಿದೆ. ಕರ್ನಾಟಕ, ತೆಲಂಗಾಣ, ತಮಿಳುನಾಡು ಸೇರಿದಂತೆ ಅನೇಕರು ಡಾರ್ಲಿಂಗ್​ ಸಿನಿಮಾದ ಮುಂಗಡ ಬುಕ್ಕಿಂಗ್​ ಖರೀದಿಸಿದ್ದಾರೆ. ಸ್ಯಾಕ್​ಲಿಂಕ್​ ಪ್ರಕಾರ ಜೂನ್​ 24ರಂದು ಬೆಳಿಗ್ಗೆ 11 ಗಂಟೆಗೆ 2.1 ಲಕ್ಷ ಟಿಕೆಟ್​ ಅನ್ನು ಜನರು ಖರೀದಿಸಿದ್ದಾರೆ. ಸದ್ಯ ಮುಂಗಡ ಟಿಕೆಟ್​​ನಲ್ಲಿಯೇ 6. 25 ಕೋಟಿ ಆದಾಯ ಮಾಡಿದೆ ಎಂದು ಹೇಳಿದೆ.

ಇದನ್ನೂ ಓದಿ: ಪ್ರೀತಿಸಿ ಮದುವೆಯಾಗ್ತೀನಿ ಕಣೆ ಎಂದು ನಂಬಿಸಿದ ಆರೋಪ.. 18 ಲಕ್ಷ ರೂಪಾಯಿ ಪೀಕಿ ಕೈಕೊಟ್ಟ ಪೊಲೀಸಪ್ಪ!


">June 24, 2024

ಇದಲ್ಲದೆ ಭಾರತ ಮಾತ್ರವಲ್ಲ, ವಿದೇಶದಲ್ಲಿ ಕಲ್ಕಿ ರಾರಾಜಿಸುತ್ತಿದೆ. ಈಗಾಗಲೇ 1,13,000 ಟಿಕೆಟ್​ಗಳನ್ನು ಮಾರಾಟ ಮಾಡಿದೆ. ಉತ್ತರ ಅಮೇರಿಕಾದಲ್ಲಿ USD 3 ಮಿಲಿಯನ್​ ಮಾರಾಟ ಕಂಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment